ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!
ನನ್ನ 'ಅಪ್ಪಾ '!!! ... ನನ್ನ ಸಾಧನೆಯ ಹಾದಿಯಲ್ಲಿ ಪ್ರತಿ ಕ್ಷಣ,ಪ್ರತಿ ನಿಮಿಷ,ಪ್ರತಿ ದಿನ ನನ್ನೊಂದಿಗೆ ನಡೆಯುತ್ತಾ ,ನಡೆಸುತ್ತಾ ಇರುವ ನನ್ನ ಬದುಕು... ನನ್ನ ಪ್ರಪಂಚ ನನ್ನ ಅಪ್ಪ...ನನ್ನ ಪ್ರಕಾರ ನಾನು ನನ್ನ ಅಪ್ಪನ ಪಡಿ ಅಚ್ಚು, ನಗು ಹಾವ-ಭಾವ ಎಲ್ಲವು ಅವರ ಹಾಗೆಯೇ... ನನ್ನ ಪಾಲಿಗೆ ನನ್ನ ಅಪ್ಪ ಒಬ್ಬ ಒಳ್ಳೆಯ ಸ್ನೇಹಿತ, ಅನುಭವಿ ಸಲಹೆಗಾರ. ಒಮ್ಮೊಮ್ಮೆ ಎಳೆಯ ಮಗು, ಮತ್ತೊಮ್ಮೆ ಹುಡುಗಾಟದ ಪೋರ, ಮಗದೊಮ್ಮೆ ಉತ್ಸಾಹಿ ಯುವಕ. ಅವರು ಕೊಟ್ಟ ಧೈರ್ಯದಿಂದಲೇ ಇಂದು ನಾನು ನಾನಗಿದ್ದೇನೆ ಅನ್ನುವುದೇ ನನ್ನ ಪಾಲಿನ ನಿತ್ಯ ಸತ್ಯ... ಅಪ್ಪ " ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ...... ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾಧ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ. ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ. ಕೋಪ ಅತಿ ಎನ್ನಿಸುವ ಶಿಸ್ತು. ಅನುಮಾನ. ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪನ ಬಗ್ಗೆ ಅದೆಂಥದ್ದೋ ಅಮೂರ್ತ ಭಯ. ಹಾಗಂತ ಆತನಲ್ಲಿ ಪ್ರೀತಿ ಇಲ್ಲ ಎಂದುಕೊಂಡರೇ ತಪ್ಪು. ಆತನಲ್ಲಿ ಅತ...