ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯೆಂಬ ಹೆಮ್ಮೆ ಇದೆ!!
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದ ಒಂದು ಹಂತವನ್ನು ಮುಗಿಸಿದ ಮೇಲೆ ನೆನಪಿಸಿಕೊಳ್ಳುವ ಸಾಮಾನ್ಯ ವಿಷಯವೆಂದರೆ ಅದು "ಬಾಲ್ಯ". "ನನ್ನ ಬಾಲ್ಯ ಎಷ್ಟು ಚೆನ್ನಾಗಿತ್ತು" ಎಂದು ಹೇಳದ ವ್ಯಕ್ತಿಗಳೇ ಇಲ್ಲಾ ಎನ್ನಬಹುದು. ಯಾವುದೇ ವಿಚಾರದ ಬಗ್ಗೆ ಆಲೋಚನೆ ಇಲ್ಲದೇ, ಆಟವಾಡುತ್ತಾ ಕಳೆದ ಆ ದಿನಗಳು ಇಂದೂ ನೆನಪು ಮಾತ್ರ. ನಾವು ಜೀವನದಲ್ಲಿ ಏನೇ ಸಾಧಿಸಿದರೂ ಬಾಲ್ಯವನ್ನು ಮರೆಯಲು ಸಾಧ್ಯವಿಲ್ಲ.ಬಾಲ್ಯದ ಆ ಮುಗ್ಧತೆ,ನಗು, ಪ್ರಾಮಾಣಿಕತೆ,ಜಾತಿ ಬೇಧವನ್ನೆ ತಿಳಿಯದ ಮನಸ್ಸು,ಮೊದಲ ಶಾಲಾ ದಿನ,ಮೊದಲ ಬಹುಮನ, ರಜಾ ದಿನಗಳಲ್ಲಿ ಸಂಬಂಧಿಕರ ಮನೆಯಲ್ಲಿ ಆಡಿದ ಆಟ, ಮರ ಹತ್ತಿದ್ದು ಇಳಿದಿದ್ದು,ಪೆಟ್ಟು ತಿಂದದ್ದು,ಜಗಳವಾಡಿದ್ದೂ, ಬೇರೆಯವರ ತೋಟದಿಂದ ಕದ್ದು ತಿಂದ ಹಣ್ಣುಗಳು,ಹೀಗೆ ಅನೇಕ ನೆನಪುಗಳು ಸ್ಮೃತಿಪಟಲದಲ್ಲಿ ಅಚ್ಚೊತ್ತಿದೆ.ಅಂದು ಕಳೆದ ಕ್ಷಣಗಳು ಇಂದು ನೆನಪಾಗಿ ಮಾತ್ರ ಉಳಿದಿದೆ.ಅಂದು ಕಳೆದ ಆ ಕ್ಷಣ ಗಳೆಲ್ಲ ನನಗೆ ತುಂಬಾ ಅಮೂಲ್ಯವಾದದ್ದು.ಅದರಲ್ಲೂ ಪ್ರಾಥಮಿಕ ಶಾಲಾ ದಿನಗು ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ.
ಜೀವನದ ಪಾಠಗಳನ್ನು ಹೇಳಿಕೊಟ್ಟ ನಿಜವಾದ ದೇಗುಲವದು. ನಾನಂತು ಕನ್ನಡ ಮಾದ್ಯಮದ ವಿದ್ಯಾರ್ಥಿನಿ. ಇಂಗ್ಲಿಷ್ ಮಾಧ್ಯಮ ದ ವಿದ್ಯಾರ್ಥಿಗಳಿಗಿಂತ ಲೂ ವಿಶೇಷ ಅನುಭವ ಹೊಂದಿದ್ದೇನೆ ಎನ್ನುವ ಕಲ್ಪನೆ ನನ್ನದು. ಶಾಲಾ ದಿನಗಳಲ್ಲಿ ಮಾಡಿದ ತರ್ಲೆ ಕೆಲಸ,ಗಣಿತ ಹೋಂವರ್ಕ್ ಮಾಡದೆ ಇದ್ದ ದಿನ,ಸುಳ್ಳು ಹೇಳಿ ಶಾಲೆಗೆ ರಜೆ ಮಾಡಿ ಸಿಕ್ಕಿ ಬಿದ್ದ ದಿನ, ಇದಕ್ಕೆಲ್ಲಾ ಶಿಕ್ಷೆ ಅನುಭವಿಸಿದ ಕ್ಷಣಗಳು ಇದೆಲ್ಲಾ ಇಂದಿಗೂ ನೆನಪಿದೆ,ಶಾಲಾ ಆವರಣವನ್ನು ಸ್ವಚ್ಚಗೊಳಿಸುವ ದು ,ನೀರಿನ ಟ್ಯಾಂಕ್ ನನ್ನು ತೊಳೆದು ನೀರು ತುಂಬಿಸುವ ದೂ ,ತರಕಾರಿ ಗಿಡಗಳನ್ನು ನೆಟ್ಟು ಬೆಳೆಸುವುದು,ಆಟವಾಡುವಾಗ ಬಿದ್ದ ಆದ ಗಾಯ ,ತಡವಾಗಿ ಶಾಲೆಗೆ ಹೋದ ದಿನಗಳು,ಸುಳ್ಳು ಹೇಲಿದಕ್ಕೆ ತಿಂದ ಪೆಟ್ಟು ಈಗ ನೆನಪಾಗಿ ನಗು ತರಿಸುತ್ತದೆ,ಆ ದಿನದ ಶಿಸ್ತಿನ ಪಾಠಗಳು ಇಂದಿಗೂ ಜೀವನದಲ್ಲಿ ಅನ್ವಯವಾಗುತ್ತದೆ.
ಇಂದು ಸಾವಿರಾರು ರೂಪಾಯಿ ಕೊಟ್ಟು ಐಷಾರಾಮಿ ಹೋಟೆಲ್ ನಲ್ಲಿ ತಿಂದರೂ, ಶಾಲೆಯ ಬಿಸಿಯುಟದ ರುಚಿಗೆಬಾರದು. ಎಲ್ಲರೂ "ಸಹನಾವವತು , ಸಹನೌ ಭುನಕ್ತು" ಎಂದೂ ಹೇಳಿದ ಶಾಂತಿ ಮಂತ್ರ ಇಂದು ನೆನಪಾಗಿ ಒಮ್ಮೆಲೇ ಮೈ ಯಲ್ಲಿ ಅದೇನೋ ಸಂಚಲನ ವಾಗುತ್ತದೆ. ಅನ್ನವನ್ನು ಬಿಸಾಡಿದಾಗ ಗುರುಗಳೂ ಹೇಳಿದ ಬುದ್ದಿ ಮಾತು ಇಂದಿಗೂ ಅನ್ನವನ್ನು ಚೆಲ್ಲುವಾಗ ನನ್ನನ್ನು ಎಚ್ಚರಿಸುತ್ತದೆ.ಜೀವನ ಎಂದರೆ ಏನು ಎಂದು ತಿಳಿಯದ ಆ ಕಾಲದಲ್ಲಿ ಜೀವಜಲ ದ ಮಹತ್ವವನ್ನು ಹೇಳಿದ ಗುರೂ ಇಂದಿಗೂ ನೆನಪಿನಲ್ಲಿ ಇದ್ದಾರೆ. ಗಣಿತವನ್ನು ದ್ವೇಷಿಸುತ್ತಿದ್ದ ನಮಗೆ ಮಗ್ಗಿಯನ್ನು ಅವರಿಗೆ ಕಲಿಸಿದ ಅವರಿಗೆ ನನ್ನ ನಮಸ್ಕಾರ. ಪ್ರಜಾಪ್ರಭುತ್ವ ದ ಪರಿಕಲ್ಪನೆಯನ್ನೇ ತಿಳಿಯದ ನಮಗೆ ಶಾಲಾ ಮಟ್ಟದ ಚುನಾವಣೆಯನ್ನು ಮಾಡಿ ಮಂತ್ರಿಮಂಡಲ ವನ್ನು ರಚಿಸಿ ಒಂದೊಂದು ಮಂತ್ರಿ ಪದವಿಯನ್ನು ಹಂಚಿ ,ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣವನ್ನು ಬೆಳೆಸಿದ್ದು ಶಾಲೆ.ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಾಗ ಆದ ಸಂಭ್ರಮ, ವಾರ್ಷಿಕೋತ್ಸವ ಕ್ಕೆ ನಡೆದ ಸ್ಪರ್ಧೆಗಳಲ್ಲಿ ಪಡೆದ ಪ್ರಶಸ್ತಿಗಳು ಇಂದೂ ಕೇವಲ ನೆನಪು ಮಾತ್ರ .
ಹೀಗೆ ಬಾಲ್ಯದಲ್ಲಿ ಕಳೆದ ದಿನಗಳು ಎಷ್ಟು ಅಮೂಲ್ಯವಾದದ್ದು.ಅಂದು ಕಲಿತ ಪಾಠಗಳು ನಮ್ಮ ಜೀವನದುದ್ದಕ್ಕೂ ಬರುತ್ತದೆ.ಪ್ರತಿಯೊಬ್ಬನೂ ಜೀವನದಲ್ಲೂ ಪ್ರಾಥಮಿಕ ಶಿಕ್ಷಣ ಹಂತವೂ ಮುಖ್ಯವಾದದ್ದು ಹಾಗೂ ಪ್ರಭಾವ ಬೀರುವಂತದು. ಕೊನೆವರೆಗೂ ಉಳಿಯುವಂತ ದ್ದು ಅದೇ ಅಲ್ವಾ..... ಆ ಬಾಲ್ಯದಲ್ಲಿ ಕಳೆದ ದಿನಗಳೂ ಇನ್ನೊಮ್ಮೆ ನಮ್ಮ ಜೀವನದಲ್ಲಿ ಬರಬಾರದೇ. ಅಂದಿನ ಆ ಮುಗ್ಧತೆ,ಹುಸಿ ಕೋಪ ,ಗಲಾಟೆ,ಪ್ರಾಮಾಣಿಕತೆ, ನಿಸ್ವಾರ್ಥ ಭಾವ,ಯಾವುದು ಇಂದು ನಮ್ಮೊಂದಿಗಿಲ್ಲ ,ತಾಂತ್ರಿಕತೆಯ ಜೀವನಕ್ಕೆ ಒಗ್ಗಿ ಹೋದ ನಮಗೆ ನಮ್ಮ ಬಾಲ್ಯ ನೆನಪಾದಾಗ ಕಣ್ಣಂಚು ಒದ್ದೆಯಾಗುತ್ತದೆ.
-✍️ಸಂಜನಾ ವಾಲ್ತಾಜೆ
Comments
Post a Comment