ಅಕ್ಕನ ಪ್ರೀತಿ!!!!

ಅಕ್ಕನ ಪ್ರೀತಿ!!!! ಅಮ್ಮ ಎನ್ನುವ ಜೀವವೆಷ್ಟು ಆತ್ಮೀಯವೋ ಅಮ್ಮ ಎಂಬ ಪದ ಕೂಡ ಅಷ್ಟೇ ಪವಿತ್ರ. ಹಾಗೆಯೇ ಅಮ್ಮನಂತೆ ತೀರಾ ಹತ್ತಿರದ ಇನ್ನೊಂದು ಸಂಬಂಧವಿದೆ, ಅವಳೇ ಅಕ್ಕನೆಂಬ ಅಮ್ಮ . ಅಮ್ಮ ತನ್ನ ಮಕ್ಕಳನ್ನೆಷ್ಟು ಪ್ರೀತಿಸುತ್ತಾಳೋ ಅಕ್ಕನೂ ತನ್ನ ಒಡಹುಟ್ಟಿದವರಿಗೆ ಕಾಳಜಿಯನ್ನು ತೋರಿಸುತ್ತಾಳೆ.ಅಮ್ಮನಂತೆ ಕುಟುಂಬದ ಜವಾಬ್ದಾರಿಗಳನ್ನು ಹೊರಬಯಸುತ್ತಾಳೆ. ಹೊಣೆಗಾರಿಕೆಯ ಅನುಭವಗಳಿಲ್ಲದಿದ್ದರೂ ತಾನು ಹಿರಿಯಳೆಂಬ ಭಾವ ತನ್ನಿಂದತಾನೆ ಮೂಡಿ ಅಮ್ಮನ ಹೆಗಲಿಗೆ ಹೆಗಲು ನೀಡುವಳು. ಅದಿಕ್ಕೇನೆ ಅವಳು ಇನ್ನೊಂದು ಅಮ್ಮನೆಂದು ಕರೆಯಿಸಿಕೊಳ್ಳುತ್ತಾಳೆ."ಅಕ್ಕನ ಸ್ಥಾನ - ಮಹತ್ವ"ಕೆಲವು ಕುಟುಂಬಗಳಲ್ಲಿ ಕಾಣುವುದೇನೆಂದರೆ ಹೆತ್ತವರಿಗಿಂತ ಅಕ್ಕನೆಂಬ ಜೀವಿ ಆತ್ಮೀಯಳು. ಒಡಹುಟ್ಟಿದವರಿಗೆ ಆಪತ್ಬಾಂಧವಳು. ಹೆತ್ತವರೊಡನೆ ಹೇಳಿಕೊಳ್ಳಲಾಗದ್ದನ್ನು ಅಕ್ಕನನ್ನು ಪುಸಲಾಯಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದಿದೆ. ಅಲ್ಲಿ ಅವಳ ಜೊತೆ ಭಯವಿಲ್ಲ, ಮನ ಬಿಚ್ಚಿ ಮಾತನಾಡಬಹುದು, ಚೇಷ್ಠೆಗೆ ಅವಕಾಶವಿದೆ. ಹೀಗೆ ಅಕ್ಕನು ಉನ್ನತ ಸ್ಥಾನದಲ್ಲಿದ್ದಾಳೆಂದು ನನ್ನ ನಂಬಿಕೆ. ಇನ್ನೂ " ಅಕ್ಕ ತಂಗಿಯ ಅನುಬಂಧ" ನನ್ನ...