ಸರ್ವಾಂಗ ಪ್ರಾವೀಣ್ಯೇ ಈಕೆ!!!
![Image](https://blogger.googleusercontent.com/img/b/R29vZ2xl/AVvXsEjmm-KYWaNFr4s6MJtPLINAzBPm98sdrbZ-eWriNuCz_2Cr9b-apTqpu_nTKBmplJnFzTAK2lOh0HComJCSJtEDG9WzBIArr7tW_73P7iyrYAgL4SafsXIIpY36Y8FC0jAKP0nNkPIc9fI/s1600/1655699372049322-0.png)
ಈಕೆ ಹೇಮಸ್ವಾತಿ ಕುರಿಯಾಜೆ.ಇವರು ಉದಯಶಂಕರ ಕುರಿಯಾಜೆ ಮತ್ತು ವಸಂತಲಕ್ಷ್ಮಿ ಇವರ ಪ್ರಥಮ ಪುತ್ರಿ. ದೇವಿಕಾ ಕುರಿಯಾಜೆ ಅವರ ಪ್ರೀತಿಯ ಅಕ್ಕ ಹೇಮಸ್ವಾತಿ!!!! ಮಾತಿನ ಮಲ್ಲಿ, ನಗುವೇ ಅವರ ಅಂದ. ಅವರ ಕೈಯಲ್ಲಿ ಆಗದೇ ಇರುವ ಕಲೆ ಯಾವುದು ಇಲ್ಲ.ಒಂದು ರೀತಿಯಲ್ಲಿ ಸರ್ವಾಂಗ ಪ್ರಾವೀಣ್ಯೇ ಇವರು.... ಇವರು ಪ್ರಾಥಮಿಕ ಶಿಕ್ಷಣವನ್ನು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪಡೆದು, ಪ್ರೌಢಶಿಕ್ಷಣವನ್ನು ಬೆಳ್ಳಾರೆ ಸರಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪೂರೈಸಿ, ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ.ಪ್ರಸ್ತುತ ಅದೇ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ.ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ . ಎಳೆ ವಯಸ್ಸಿನಲ್ಲೇ ಸಂಗೀತ ಅಭ್ಯಾಸ ಮಾಡಿದ್ದಾರೆ.ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯನ್ನು ಪೂರೈಸಿದ್ದಾರೆ . ಸುಮಧುರವಾಗಿ ಹಾಡುವ ಇವರು ಹಲವಾರು ಸ್ಪರ್ಧೆಗಳಿಗೆ ತೆರಳಿ ಪ್ರಶಸ್ತಿಯನ್ನು . ಬಾಚಿಕೊಂಡಿದ್ದಾರೆ. ಕರಾವಳಿಯ ಗಂಡುಕಲೆ ಆದಂತಹ ಯಕ್ಷಗಾನವನ್ನು ವಾಸುದೇವ ರೈ ಇವರ ಬಳಿ ಅಭ್ಯಸಿಸಿ,ಹಲವಾರು ಕಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. ಪ್...