ಸರ್ವಾಂಗ ಪ್ರಾವೀಣ್ಯೇ ಈಕೆ!!!
ಈಕೆ ಹೇಮಸ್ವಾತಿ ಕುರಿಯಾಜೆ.ಇವರು ಉದಯಶಂಕರ ಕುರಿಯಾಜೆ ಮತ್ತು ವಸಂತಲಕ್ಷ್ಮಿ ಇವರ ಪ್ರಥಮ ಪುತ್ರಿ. ದೇವಿಕಾ ಕುರಿಯಾಜೆ ಅವರ ಪ್ರೀತಿಯ ಅಕ್ಕ ಹೇಮಸ್ವಾತಿ!!!! ಮಾತಿನ ಮಲ್ಲಿ, ನಗುವೇ ಅವರ ಅಂದ. ಅವರ ಕೈಯಲ್ಲಿ ಆಗದೇ ಇರುವ ಕಲೆ ಯಾವುದು ಇಲ್ಲ.ಒಂದು ರೀತಿಯಲ್ಲಿ ಸರ್ವಾಂಗ ಪ್ರಾವೀಣ್ಯೇ ಇವರು....
ಇವರು ಪ್ರಾಥಮಿಕ ಶಿಕ್ಷಣವನ್ನು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪಡೆದು, ಪ್ರೌಢಶಿಕ್ಷಣವನ್ನು ಬೆಳ್ಳಾರೆ ಸರಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪೂರೈಸಿ, ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ.ಪ್ರಸ್ತುತ ಅದೇ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ.ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ .
ಎಳೆ ವಯಸ್ಸಿನಲ್ಲೇ ಸಂಗೀತ ಅಭ್ಯಾಸ ಮಾಡಿದ್ದಾರೆ.ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯನ್ನು ಪೂರೈಸಿದ್ದಾರೆ . ಸುಮಧುರವಾಗಿ ಹಾಡುವ ಇವರು ಹಲವಾರು ಸ್ಪರ್ಧೆಗಳಿಗೆ ತೆರಳಿ ಪ್ರಶಸ್ತಿಯನ್ನು .
ಕರಾವಳಿಯ ಗಂಡುಕಲೆ ಆದಂತಹ ಯಕ್ಷಗಾನವನ್ನು ವಾಸುದೇವ ರೈ ಇವರ ಬಳಿ ಅಭ್ಯಸಿಸಿ,ಹಲವಾರು ಕಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ದಿ.ಪದ್ಯಾಣ ಗಣಪತಿ ಭಟ್ ಇವರಲ್ಲಿ ಭಾಗವತಿಕೆಯನ್ನು ಕಲಿತು ಹಲವಾರು ಕಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. "ಕುರಿಯಾಜೆ ಭಾಗವತರು" ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.
ವಿದುಷಿ ಯೋಗೀಶ್ವರಿ ರೈ ಇವರ ಬಳಿ ಭರತನಾಟ್ಯವನ್ನು ಕಲಿತು, ಸೀನಿಯರ್ ಪರೀಕ್ಷೆಯನ್ನು ಪೂರೈಸಿದ್ದಾರೆ.
100 ಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ.
ಇವರು ಎನ್.ಸಿ.ಸಿ ವಿಭಾಗದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಇವರು ತನ್ನ ಪ್ರೌಢಶಿಕ್ಷಣದ ಅವಧಿಯಲ್ಲಿ ಜೆ.ಡಬ್ಲ್ಯೂ ಆಗಿ ಎ ಸರ್ಟಿಫಿಕೇಟ್ ಪಡೆದ ನಂತರದಲ್ಲಿ ಪದವಿಪೂರ್ವ ವಿದ್ಯಾಭ್ಯಾಸದ ಸಮಯದಲ್ಲಿ ಎಸ್ .ಡಬ್ಲ್ಯೂ ಆಗಿ ಸೇರಿ, ಪ್ರಸ್ತುತ ವಿವೇಕಾನಂದ ಕಾಲೇಜಿನ ಎನ್.ಸಿ.ಸಿ ಘಟಕದ ಜೆ.ಯು ಒ ಆಗಿ ಕರ್ನಾಟಕ ಗೋವಾ ಡೈರೆಕ್ಟರೇಟ್ ನ ಮಂಗಳೂರು ಗ್ರೂಪಿನ 19/ಕಾರ್ ಮಡಿಕೇರಿ ಬೆಟಾಲಿಯನ್ ನ ಪ್ರತಿನಿಧಿಯಾಗಿ ಗಣರಾಜ್ಯೋತ್ಸವದ ಪರೇಡ್ ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ತನ್ನ ಬಿಡುವಿನ ವೇಳೆಯಲ್ಲಿ ಚಿತ್ರಕಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾರೆ . ಒಟ್ಟಿನಲ್ಲಿ ಈಕೆ ಸರ್ವಾಂಗ ಪ್ರಾವೀಣ್ಯೇಯೇ ಸರಿ...
-✍️ ಸಂಜನಾ ವಾಲ್ತಾಜೆ
Comments
Post a Comment