Posts

Showing posts from October, 2022

ಪ್ರೀತಿಸುವವರನ್ನು ಕೊಂದುಬಿಡಿ - ಜೋಗಿ

ಪ್ರೀತಿಸುವವರನ್ನು ಕೊಂದುಬಿಡಿ - ಜೋಗಿ ಅರ್ರೇ! ಈ ಕೃತಿಯ ಹೆಸರೇ ವಿಚಿತ್ರವಾಗಿದೆಯಲ್ವಾ ಎಂದು ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನಗನಿಸಿತು.  ಶೀರ್ಷಿಕೆಯೇ ವಿಚಿತ್ರವಾಗಿದೆ! ಪ್ರೀತಿಸುವವರನ್ನು ಕೊಲ್ಲುವುದು ಎಂದರೇನು? ಸಾಧ್ಯವಾ ಅದು, ಅಷ್ಟು ಪ್ರೀತಿಸಿಕೊಳ್ಳುವುದು‌ ಬದುಕುವುದಕ್ಕಾಗಿ ಅಲ್ಲವಾ? ಸಾಯಿಸಿ ಎನ್ನುತ್ತಿದ್ದಾರಲ್ಲ ಎಂಬ ನಾಲ್ಕೈದು ಪ್ರಶ್ನೆಗಳೊಂದಿಗೆ ಶುರುವಿಟ್ಟೆ..!! ಮುಂದುವರಿದು ಲೇಖಕರ ಮೊದಲ ಮಾತಿನಲ್ಲಿ " ಈ ಪುಸ್ತಕ ಸಾಹಿತ್ಯವನ್ನು ಈಗಾಗಲೇ ಓದಿಕೊಂಡಿರುವ ಪ್ರಾಜ್ಞರಿಗಾಗಿ ಅಲ್ಲ. ಈಗಷ್ಟೇ ಕನ್ನಡ ಕೃತಿಗಳನ್ನು ಓದಲು ಶುರು ಮಾಡಿರುವ ಹದಿಹರೆಯದ ತರುಣ ತರುಣಿಯರಿಗೆ ಆರಂಭಿಸಿರುವ ಮಾಲಿಕೆ ಇದು" ಎಂಬುವುದನ್ನು ಓದಿದಾಗ ಈ ಪುಸ್ತಕ ಓದಲೇಬೇಕೆನ್ನಿಸಿತು.  ಅಂತ್ಯವಿಲ್ಲದ ಕಥೆಗಳು ಈ ಕೃತಿಯ ಪ್ರತಿಯೊಂದು ಅಧ್ಯಾಯದಲ್ಲಿದೆ. ಪ್ರತೀ ಕಥೆಯ ಕೊನೆಗೂ ಹಲವು ಪ್ರಶ್ನೆಗಳನ್ನು ಮುಂದಿಡುವ ಜೋಗಿಯವರು ಅದನ್ನು ಓದುಗನ ವಿವೇಚನೆಗೆ ಬಿಟ್ಟುಬಿಡುತ್ತಾರೆ. ಪ್ರೀತಿಯ ಬಗ್ಗೆ, ಬದುಕಿನ ಅನಿಶ್ಚಿತತೆಯ ಬಗ್ಗೆ ಕಥೆಯ ಜೊತೆಗೆ ಅಲ್ಲಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಾರೆ. ಇಲ್ಲಿರುವ ವ್ಯಾಖ್ಯಾನಗಳು ಬಹು ಅಮೂಲ್ಯವಾದವುಗಳೂ, ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದಂತವುಗಳೂ ಆಗಿವೆ. ಪ್ರೀತಿಯೆಂದರೆ "ಅವನು, ಅವಳು" ಪ್ರೀತಿಗೆ ಸೀಮಿತವಲ್ಲ. ಬದುಕಿನೆಡೆಗೆ ಇರುವುದೂ ಪ್ರೀತಿಯೇ!  ಒಂದು ಇಪ್ಪತ್ತು ಸಣ್ಣಕಥೆಗಳಿರುವ ೨೦೩ ...

ತಲೆದಂಡ!!!

Image
ತಲೆದಂಡ!!! ಆಧುನಿಕತೆಯ ಹೆಸರಿನಲ್ಲಿ ಕಾಡಿನ ಮಧ್ಯದಲ್ಲಿ ರಸ್ತೆಗಳ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಕಡಿದಿರುವ ಉದಾಹರಣೆಳಿವೆ. ಮರ ಕಡಿಯುವುದರಿಂದ ಆಗುವ ಅನಾಹುತಗಳ ಬಗ್ಗೆ ಬೀದಿ ನಾಟಕ, ಸಾಕ್ಷ್ಯಚಿತ್ರಗಳ ಮೂಲಕ ಆಗಾಗ ಅರಿವು ಮೂಡಿಸುತ್ತಲೇ ಇರುತ್ತಾರೆ. ಈ ಬಾರಿ ನಿರ್ದೇಶಕ ಪ್ರವೀಣ್‌ ಕೃಪಾಕರ್‌ ‘ತಲೆ ದಂಡ’ ಸಿನಿಮಾದ ಮೂಲಕ ಮರ, ಗಿಡಗಳು, ಪ್ರಕೃತಿ ಮನುಷ್ಯನ ಜೀವನಕ್ಕೆ ಎಷ್ಟು ಅವಶ್ಯಕ ಮತ್ತು ಅದರ ವಿರುದ್ಧ ನಿರಂತರ ಹೋರಾಟ ಮಾಡುತ್ತಲೇ ಇರಬೇಕು ಎಂಬ ಅಂಶವನ್ನು ಸರಳವಾಗಿ ಹೇಳಿದ್ದಾರೆ. ಪ್ರವೀಣ್‌ ಕೃಪಾಕರ್‌ ಇಂತಹದ್ದೊಂದು ಸೂಕ್ಷ್ಮವಾದ ವಿಷಯವನ್ನು ಹೇಳಲು ಆಯ್ಕೆ ಮಾಡಿಕೊಂಡಿರುವ ಕಥಾ ನಾಯಕ ಬುದ್ಧಿ ಮಾಂದ್ಯ ಎಂಬುದು ವಿಶೇಷ. ಒಂದು ಸರಳ ಕಥೆ ವಯಸ್ಸಾದರೂ ಬುದ್ದಿ ಬೆಳೆಯದೇ ಇರುವವನಿಗೂ ಗಿಡ, ಮರಗಳ ಮಹತ್ವ ಗೊತ್ತು. ಎಲ್ಲವನ್ನು ತಿಳಿದಿರುವ ಬುದ್ಧಿವಂತರಿಗೆ ಅದರ ಅರಿವಿಲ್ಲದೇ ಹೋಗುತ್ತಿರುವುದು ವಿಪರ್ಯಾಸ ಎಂಬುದನ್ನು ಸೂಚ್ಯಕವಾಗಿ ತಿಳಿಸಿದ್ದಾರೆ. ಸೋಲಿಗರ ಹುಡುಗ ಬುದ್ಧಿ ಕಡಿಮೆ ಇರುವ ಕುನ್ನೇ ಗೌಡನಿಗೆ (ಸಂಚಾರಿ ವಿಜಯ್‌) ಕಾಡು, ಗಿಡ, ಮರವೆಂದರೆ ಅಚ್ಚುಮೆಚ್ಚು. ಗಿಡಗಳನ್ನು, ಮರಗಳನ್ನು ಅತಿಯಾಗಿ ಪ್ರೀತಿಸುವ ಈತ, ಊರಿನಲ್ಲಿರುವ ಮರಗಳನ್ನು ಕಡಿದು ರಸ್ತೆ ಮಾಡಲು ಬಂದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಹೋಗುತ್ತಾನೆ. ಆತನನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಆತನ ಮಾನಸಿಕ ಆರೋಗ್ಯ ಸರಿ ಇಲ್ಲದ ಕಾರ...