ಪ್ರೀತಿಸುವವರನ್ನು ಕೊಂದುಬಿಡಿ - ಜೋಗಿ
ಪ್ರೀತಿಸುವವರನ್ನು ಕೊಂದುಬಿಡಿ - ಜೋಗಿ ಅರ್ರೇ! ಈ ಕೃತಿಯ ಹೆಸರೇ ವಿಚಿತ್ರವಾಗಿದೆಯಲ್ವಾ ಎಂದು ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನಗನಿಸಿತು. ಶೀರ್ಷಿಕೆಯೇ ವಿಚಿತ್ರವಾಗಿದೆ! ಪ್ರೀತಿಸುವವರನ್ನು ಕೊಲ್ಲುವುದು ಎಂದರೇನು? ಸಾಧ್ಯವಾ ಅದು, ಅಷ್ಟು ಪ್ರೀತಿಸಿಕೊಳ್ಳುವುದು ಬದುಕುವುದಕ್ಕಾಗಿ ಅಲ್ಲವಾ? ಸಾಯಿಸಿ ಎನ್ನುತ್ತಿದ್ದಾರಲ್ಲ ಎಂಬ ನಾಲ್ಕೈದು ಪ್ರಶ್ನೆಗಳೊಂದಿಗೆ ಶುರುವಿಟ್ಟೆ..!! ಮುಂದುವರಿದು ಲೇಖಕರ ಮೊದಲ ಮಾತಿನಲ್ಲಿ " ಈ ಪುಸ್ತಕ ಸಾಹಿತ್ಯವನ್ನು ಈಗಾಗಲೇ ಓದಿಕೊಂಡಿರುವ ಪ್ರಾಜ್ಞರಿಗಾಗಿ ಅಲ್ಲ. ಈಗಷ್ಟೇ ಕನ್ನಡ ಕೃತಿಗಳನ್ನು ಓದಲು ಶುರು ಮಾಡಿರುವ ಹದಿಹರೆಯದ ತರುಣ ತರುಣಿಯರಿಗೆ ಆರಂಭಿಸಿರುವ ಮಾಲಿಕೆ ಇದು" ಎಂಬುವುದನ್ನು ಓದಿದಾಗ ಈ ಪುಸ್ತಕ ಓದಲೇಬೇಕೆನ್ನಿಸಿತು. ಅಂತ್ಯವಿಲ್ಲದ ಕಥೆಗಳು ಈ ಕೃತಿಯ ಪ್ರತಿಯೊಂದು ಅಧ್ಯಾಯದಲ್ಲಿದೆ. ಪ್ರತೀ ಕಥೆಯ ಕೊನೆಗೂ ಹಲವು ಪ್ರಶ್ನೆಗಳನ್ನು ಮುಂದಿಡುವ ಜೋಗಿಯವರು ಅದನ್ನು ಓದುಗನ ವಿವೇಚನೆಗೆ ಬಿಟ್ಟುಬಿಡುತ್ತಾರೆ. ಪ್ರೀತಿಯ ಬಗ್ಗೆ, ಬದುಕಿನ ಅನಿಶ್ಚಿತತೆಯ ಬಗ್ಗೆ ಕಥೆಯ ಜೊತೆಗೆ ಅಲ್ಲಲ್ಲಿ ವ್ಯಾಖ್ಯಾನಗಳನ್ನು ನೀಡುತ್ತಾರೆ. ಇಲ್ಲಿರುವ ವ್ಯಾಖ್ಯಾನಗಳು ಬಹು ಅಮೂಲ್ಯವಾದವುಗಳೂ, ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದಂತವುಗಳೂ ಆಗಿವೆ. ಪ್ರೀತಿಯೆಂದರೆ "ಅವನು, ಅವಳು" ಪ್ರೀತಿಗೆ ಸೀಮಿತವಲ್ಲ. ಬದುಕಿನೆಡೆಗೆ ಇರುವುದೂ ಪ್ರೀತಿಯೇ! ಒಂದು ಇಪ್ಪತ್ತು ಸಣ್ಣಕಥೆಗಳಿರುವ ೨೦೩ ...